ಜ್ವಾಲಾಮುಖಿ
ಭೂಮಿಯ ರಚನೆಯು ಬಲು ರೋಚಕವು
ಒಳಗಡೆ ಅಡಗಿದೆ ಮ್ಯಾಗ್ಮಾರಸವು
ಹೊರಗಡೆ ಬಂದರೆ ಲಾವಾರಸವು
ಕುದಿಯುತಿಹುದು ಬಲು ಉಷ್ಣದಲಿ
ಹೊರಗಡೆ ಬರುವುದು ಬಲು ರಭಸದಲಿ
ದಾರಿಯು ಅದಕೆ ಭೂ ಸೀಳಿನಲಿ
ಚಿಮ್ಮುವುದತೀ ಉಷ್ಣದಲಿ
ಅದರಲ್ಲಿ ವಿಧಗಳು ಹಲವುಗಳು
ಸುಪ್ತ, ಲುಪ್ತ, ಜಾಗೃತವೆಲ್ಲವೂ
ಬೂದಿಯು ಹೊಗೆಯು ಬರುವುವು ಜೊತೆಗೆ
ಹಾರುವುದು ಬಹು ದೂರದಲಿ
ನೋಡಲು ಕಣ್ಣಿಗೆ ಬಲು ಸುಂದರವು
ಹತ್ತಿರವಿದ್ದರೆ ಮಹಾ ಅಪಾಯವು
ಇದಕೆ ಎಂಬರು ಜ್ವಾಲಾಮುಖಿಯು.
೨೦೦೩
--ಪ್ರಶಾಂತ ಪಟಗಾರ

0 ಕಾಮೆಂಟ್‌ಗಳು
If you have any doubts pls comment