ಎಲ್ಲಿದೆ ಹೇಳಿ

ಎಲ್ಲಿದೆ ಹೇಳಿ

ಹಾರಾಡುವ ಬಾನಾಡಿಗಳೇ...
ಜಗದ ಸುಂದರತೆಯ ಕಂಡಿರುವಿರಾ?
ಕಂಡಿದ್ದರೆ ಎಲ್ಲಿದೆ ಎಂದು ಹೇಳುವಿರಾ?
ಹುಡುಕಿ ಹುಡುಕಿ ಸುಸ್ತಾಗಿರುವೆ ನಾನು.
ಎಲ್ಲಿ ನೋಡಿದರೂ ಬರೀ ಕಾಂಕ್ರೀಟು ಕಾಡುಗಳೇ,
ನಿಜವಾದ ಸುಂದರತೆ ಎಲ್ಲಿದೆ ಎಂದು ಹೇಳುವಿರಾ!!

ಒಂದಾನೊಂದು ಕಾಲದಲ್ಲಿ ಮರಗಳಿದ್ದುವಂತೆ ಇಲ್ಲಿ 
ಓ ಹಕ್ಕಿಗಳೇ ನಿಮ್ಮ ಮನೆ ಎಲ್ಲಿದೆ ಈಗ?
ನೀವಿರುವುದು ಮರದ ಮೇಲಲ್ಲವೇ?
ಹಾಗಾದರೆ ನಿಮ್ಮ ವಾಸಸ್ಥಾನವೆಲ್ಲಿ ಈಗ?
ಮರದ ಮೇಲೆ ಗೂಡು ಕಟ್ಟುತ್ತಿದ್ದರಂತೆ ನೀವೂ...
ಈಗ ಎಲ್ಲಿ????

ಮೊದಲಲ್ಲಿ ಹಿಂಡು ಹಿಂಡು ಡೈನೋಸಾರ್‌ಗಳು,
ಕಾಡು ಪ್ರಾಣಿಗಳಿದ್ದುವಂತೆ ಇಲ್ಲಿ.
ಆದರಿಂದು ಅದನ್ಮೀರಿಸುವ ಬಸ್ಸಲ್ಡೋಜರುಗಳು
ಮಹಾ ಭಯಂಕರ ಶಬ್ಧಮಾಡಿ ಹೊಗೆ ಬಿಡುವ 
ಪರಿಸರ ವಿನಾಶಿಗಳು...

ನಿಜವಾದ ಭೂಮಿಯ ಸುಂದರ ಸ್ಥಳವ 
ಹುಡುಕಿ ಹುಡುಕಿ ಸುಸ್ತಾಗಿ ಬೀಳುತ್ತಿರುವೆ ನಾನು.
ಬೇಗ, ಬೇಗ ಹೇಳಿ ನಾನಲ್ಲಿಗೆ ಬರುವೆ.
ಬರುವೆ...ಬರುವೆ...ಬರುವೆ......


ನಾನು ಪ್ರಶಾಂತ ಪಟಗಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು