ಸುಂದರ ಮುಖದ ಸುಂದರ ಚೆಲುವೆ
ಎಲ್ಲಿರುವೆ ನೀನು? ನಿನಗಾಗಿ ನಾನು;
ಎಂದೆಂದಿಗೂ ಕಾದಿರುವೆ,
ಬಾ ಬೇಗ      ಬಾ ಬೇಗ
ನನ್ನ ಮನಸಿನ ಮುದ್ದು ರಾಣಿ,
ಬಾ - ಬೇಗ - ಸಂಭವಿಸು

ಓದಲು ಮನಸಿಲ್ಲದೇ ಕುಳಿತಾಗ
ಬೆನ್ನಿಗೆ ಗುದ್ದಿ ನೀನು ಓದು ಎಂದು ಹೇಳಿ
ಕಾರಣಳು ಸರ್ವಕೆ
ಬುದ್ದಿಗೆ ಬುದ್ಧಿ.
ಚಂಚಲಕೆ ಕಡಿವಾಣ ನೀನು
ಪ್ರೇರಣೆ ಎಲ್ಲದಕೆ;
ಮನಸ್ಸಿನ ಮನಸ್ಸು.

ನಿದ್ದೆಗೆಟ್ಟಾಗ ದಿನಗಳಲಿ
ಚೈತನ್ಯಳು ನೀನೆ ಎಚ್ಚರವಿರಲು
ಸಮಯ ಸಮಯದಿ ಜೋಗುಳವನುಡಿದು
ವಿಶ್ರಾಂತಿಸಿದವಳು ನೀನಲ್ಲವೇ?
ನೀನೇ ನನ್ನ ಪ್ರೇರಣೆ, ಆಶಾವಾದ, ಶಕ್ತಿ ಇತ್ಯಾದಿ
ನೀನಿದ್ದರೆ ನನ್ನೊಡನೆ ಬೇರಾರು ಬೇಡವೇ ಬೇಡ!!

೦೨/೦೪/೨೦೦೪
೧೦:೩೦ ಬೆಳಿಗ್ಗೆ

ಪ್ರಶಾಂತ ಪಟಗಾರ