ನೀನೊಂದು ಸದಾ ಪುಟಿಯುವ ಒರತೆ
ಮುಖದ ಮೇಲಿನ ನಗು ಇನ್ನೇನು ಕೊರತೆ
ಮರುಭೂಮಿಯ ಓಯಾಸಿಸ್ಸೂ ಸೋಲುವುದು
ನಿನ್ನ ಚಿಮ್ಮುವ ಪ್ರೀತಿಯ ಒಲವ ಧಾರೆಗೆ
ಬಾಯಾರಿದರೇ ನಿನ್ನ ಬಳಿಗೇ ಓಟ
ನಿನ್ನಲ್ಲಿಯೇ, ಭೂ ತಾಯಿಯ ಒಲವಿನ ಮಾಟ
ತಾಳ್ಮೆ ಇಲ್ಲೆಂದು ಪದೆ ಪದೆ ನೀನ್ನ ಮೊರೆತ
ಅದು ಬಗೆದಷ್ಟು ಬರಿದಾಗದ ಜೀವಾಮೃತ
ಕಣ್ಣಂಚಲಿನ ಮಿಂಚು ಏನನು ತೋರುತಿದೆ?
ಹೇಳು ನೀ ಬೇಗ ನನ್ನ ತಲೆ ಕೊರೆಯುತಿದೆ
ಸಿಕ್ಕಿದಾಗ ಬಾಚಿ ತಬ್ಬಿಕೊಳ್ಳದಿರೆ
ಅವಕಾಶ ಶೂನ್ಯರಾಗುವರು
ಬೆಸಗೆಯ ಬಯಲ ಬಿಸಿ ಬಸಿರಿಗೆ
ಮರದ ನೆರಳೇ ಬೇಕು ಬಸವಳಿದ ಜೀವಿಗೆ
ಪ್ರಶಾಂತನ ಪ್ರತೀತಿ


0 ಕಾಮೆಂಟ್‌ಗಳು
If you have any doubts pls comment