ನಾಳೆ ಎನ್ನುವುದು ಕಲ್ಪನೆ ಮಾತ್ರ
ಈಗಿರುವೆಯಾ ಚಿವುಟಿ ನೋಡಿಕೊ
ನಿನ್ನೆಗಳ ಮೂಟೆ ಕಟ್ಟಿ ತೇಲಿ ಬಿಡು
ಹೋಗಿ ಸೇರಲಿ ಭಗವಂತನೆಡೆಗೆ
ಮುಂಬರುವ ದಿನಗಳ
ಕಂಡವರಾರು ಗೆಳೆಯಾ?
ನಡೆವುದಷ್ಟೇ ಕಾಯಕವು
ಅವನ ಅಣತಿ ಮೀರಿ ಇಲ್ಲೇನು
ನನ್ನದು-ನಿನ್ನದು ನಡೆಯದು ಗೆಳತಿ
ಎಲ್ಲ ಅವನಿಚ್ಚೆ ತಿಳಿದು
ನಡೆದರೆ ಸಂಬ್ರಮದ
ಸಮಾಧಾನ ಮೇಲೆದ್ದು ಬರುವುದು
ಪ್ರಶಾಂತನ ಸಮಾಧಾನ


0 ಕಾಮೆಂಟ್‌ಗಳು
If you have any doubts pls comment