ಸುನಾಮಿ
ಅಳುತಿತ್ತು ಸಾಗರವು ಅಂದು
ಯಾಕೆಂದು ಕೇಳಿದೆನಂದು
ಬಂದಿಹುದು ಕರೆಯು ನನಗೆ
ಭೂಮಿಯ ಮೇಲೇರಲು
ಜೀವಿಗಳ ಜೀವ ಹಿಂಡಲು
ಶಾಂತಿಯನು ಕದಡಿ ಕಲಕಲು
ಕಣ್ಣ ಒರತೆ ಚಿಮ್ಮಿಸಲು
ಮೌನದೊಡನೆ ಹೋರಾಡಲು
ಪ್ರಕೃತಿಯ ಸಮಗೈಯಲು
ಬಂದಿಹುದು ಕರೆಯು ನನಗೆ
ಓ ಸಾಗರವೇ ಬಂದಿಹುದೇ ಕರೆಯು
ಬರುವೆಯಾ ನೀನು ಜೀವ ಹಿಂಡಲು
ಸರಿ ಬಿಡು ನೀನೇ ಬಯಸಿದ್ದಲ್ಲ
ಭೂತಾಯಿ ಮುನಿದಿರಬೇಕು
ನಿನಗೆ ಹೋಗೆಂದು ಅಜ್ಞಿಸಿರಬೇಕು
ಸರಿ ಬಿಡು ನೀನೊಂದು ನೆಪವಷ್ಟೆ
ಈ ಪ್ರಕೃತಿಗೆ ಸಮನಾರಿಹರು
ನಾನಾ - ನೀನಾ ?!!
ನಾನು ಪ್ರಶಾಂತ ಪಟಗಾರ


0 ಕಾಮೆಂಟ್‌ಗಳು
If you have any doubts pls comment