ಒಳಗೆ ಏನಿದೆ?

ಒಳಗೆ ಏನಿದೆ?

ನಗುಮುಖದ ಒಳಗೆ ಏನಿದೆ?
ಬರೀ ದುಗುಡ ಚಿಂತೆ ಬಿಗುಮಾನ
ಹೊರನೋಟಕ್ಕೆ ಕಾಣಿವುದು
ಬರೀ ಪೋಷಾಕುಗಳ ಬಣ್ಣ
ಆದರೆ............
ಆ ಪೋಷಾಕಿನ ಒಳಗಿರುವ
ಒಳವಸ್ತ್ರ ಹರಿದಿದೆ ನೋಡಿ
ಅದನ್ನು ಕಾಣದಂತೆ ಮರೆಮಾಚುವ 
ಯತ್ನ ನಡೆದಿದೆ ಕಾಣಿ
ಹೀಗೆ ನಡೆದಿದೆ ಈ ಜಗತ್ತು

ಪಕ್ಕದ ಮನೆಯವರ ಕುಶಲವ ಬಿಡಿ
ಅವರ ಪರಿಚಯ ಇರುವುದೇ ಕೇಳಿ ನೋಡಿ
ಬಣ್ಣ ಬಣ್ಣದ ವಿಚಿತ್ರ ಸ್ವರೂಪದ
ವಾಹನದ ಮೋಡಿ ಈ ಜನಕ್ಕೆ
ಹಿಡಿದಿದೆ ಸಮೂಹ ಸನ್ನಿ
ಮಾರನೇಯ ದಿನ ಪೆಟ್ರೋಲು ಹಾಕಲು
ಕಾಸಿಲ್ಲ- ಆ ಮಾತು ಬೇರೆ ಬಿಡಿ

ನೋಡಿ ಹೀಗಿದೆ ನಮ್ಮ ಜಗತ್ತು
ಹೇಳಿ ಹೇಗಿದೆ ನಮ್ಮ ಜಗತ್ತು 


ನಾನು ಪ್ರಶಾಂತ ಪಟಗಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು