ದಿನ ದಿನ ಬೆಳೆಯುತಿದೆ,
ಕ್ಷಣ ಕ್ಷಣ ಕಳೆಯುತಿದೆ,
ಗೆಳೆಯ, ನಿನ್ನ ನೆನಪ ಖಾತೆ ಕೂಡುತಿದೆ.||

ಮುಂಜಾನೆ ಸೂರ್ಯನಂತೆ, ಕಣ್ಣಿಗೆಲ್ಲಾ ಆನಂದ,
ಅಪರಾಹ್ನದ ಬಿಸಿಲಂತೆ, ಮೈತುಂಬಾ ನಿನಗಂದ,
ಮುಸ್ಸಂಜೆ ಕೆಂಪಿನಂತೆ, ನೀನೇ ನನ್ನ ಹಣೆ ಗಂಧ,
ನಿಶೆಯ ತಬ್ಬಿ ಮಲಗಿದೆ ನೆನಪೇ ಸುಗಂಧ.

ದಿನ ದಿನ ಬೆಳೆಯುತಿದೆ,
ಕ್ಷಣ ಕ್ಷಣ ಕಳೆಯುತಿದೆ,
ಗೆಳೆಯ, ನಿನ್ನ ನೆನಪ ಖಾತೆ ತುಂಬುತಿದೆ.||

ನನ್ನ ಮುಖದ ತುಂಬೆಲ್ಲಾ, ನಿನ್ನ ನೆನಪು ಕೆಂಪೇರಿ,
ಆ ಚಂದಿರ ನಾಚುವನು, ನನ್ನ ನೋಡಿ ಬಾನೇರಿ
ಮೈ ತುಂಬಾ ನವಿಲ ಕುಣಿತ, ಗರಿಬಿಚ್ಚಿ ಕಾವೇರಿ,
ಓಡಿ ಬಂತು ಪ್ರೀತಿ ಮುತ್ತು ನನ್ನ ಕೆನ್ನೆ ಮೇಲೇರಿ

ದಿನ ದಿನ ಬೆಳೆಯುತಿದೆ,
ಕ್ಷಣ ಕ್ಷಣ ಕಳೆಯುತಿದೆ,
ಗೆಳೆಯ, ನಿನ್ನ ನೆನಪ ಖಾತೆ ಹೆಚ್ಚುತಿದೆ.||

ಬೀಸು ಗಾಳಿ ಹೊತ್ತು ತಂತು, ನಿನ್ನ ಒಂದು ಸಂಗತಿ,
ತಡಮಾಡದಲೆ ಹೇಳಿದೆ, ನೀನೆ ನನ್ನ ಸಂಗಾತಿ,
ನೀನೆ ನೀನೇ, ನನ್ನೆದೆಯಲಿ ಮಿಡಿವ ಚಿತ್ತಾರ, 
ನೀನೇ ನೀನೆ, ನನ ದೇವರು‌ ಕೊಟ್ಟ ವರ.

ದಿನ ದಿನ ಬೆಳೆಯುತಿದೆ,
ಕ್ಷಣ ಕ್ಷಣ ಕಳೆಯುತಿದೆ,
ಗೆಳೆಯ, ನಿನ್ನ ನೆನಪ ಸಾಲ ತೀರಿಸಲಾರೆ.||
ಓ ಮುದ್ದು ಬಂಗಾರ...
ದಿನ ದಿನ ಬೆಳೆಯುತಿದೆ,
ಕ್ಷಣ ಕ್ಷಣ ಕಳೆಯುತಿದೆ,