ಜೊತೆಗಿರುವವರು

ಹೊಗಳಿ ಹೊನ್ನ ಶೂಲಕ್ಕೇರಿಸುವರಯ್ಯಾ
ನಮ್ಮ ಜೊತೆಗಿದ್ದಾಗ
ಬೆನ್ನಿಗೆ ಚೂರಿಹಾಕುವರಯ್ಯಾ
ನಿಮ್ಮ ಜೊತೆಗಿದ್ದಾಗ

ನೀನೇ!... ನೀನೇ ಎಲ್ಲಾ ಎಂಬರು
ಮುಂದಿದ್ದಾಗ
ಅವನೇನು ಮಹಾ ಎಂಬರು
ಹಿಂದಿರುವಾಗ
ಈ ಲೋಕದ ವಿಚಿತ್ರರು ಇವರು

ಇವರ ನಂಬಬೇಕೇ?
ಬಿಡಬೇಕೇ? ಎಂದು ತಿಳಿಯದು
ಸ್ನೇಹವ ಬಯಸಿ ಹಸ್ತ ಚಾಚಿದರೆ
ಕೊಡುವರು ಕೈ ಅವರೇ ಮೊದಲು

ಇಂದೋ ನಾಳೆಯೋ ಸರಿ ಹೊಂದುವರು
ನಂಬಿಕೆಯು ಉಳಿದಿಹುದಿನ್ನು!!!
ಅವರ ಸಂಗದಿಂ ನಾನೂ ಹಾಗಾದನೇ ಎಂದೆನಿಸುವುದಯ್ಯಾ
ಒಮ್ಮೊಮ್ಮೆ..... ಹಾಗಾಗದು ಎಂದು

ಹೀಗೇಕಿದೆ?
ಹೀಗಿರುವರೇಕೆ?
ತಿಳಿಯದಲೆ ಕುಳಿತಿರುವೆ ನಾನು!!!

೧೬/೦೨/೨೦೦೪
ಪ್ರಶಾಂತ ಪಟಗಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು