God is great my love❤️

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||

ಯಾವ ಜನ್ಮದ ಋಣವೋ ಕಾಣೆ
ನಿಮ್ಮ ಪ್ರೀತಿ ದೊರಕಿದೆ,
ಹೃದಯ ಗೀತೆ ನೀನೇ ನನ್ನಾಣೆ
ಜೀವ ನಿನಗೆಂದೇ ಮಿಡಿದಿದೆ.

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||

ದೇವ ನಿನ್ನ ಒಲುಮೆ ಬೇಕೊ
ಜೀವ ಜೀವ ಸೇರಲು
ಜನುಮ ಜನುಮಕೂ ನೀನೇ ಬೇಕು
ಹಸಿ ಹಸಿರ ಪ್ರೀತಿ ನೀಡಲು.

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||

ಮನಸು ಭಾರವಾಗಿದೆ.
ಇನ್ನೂ ಹೂ ಅರಳಿಲ್ಲ.
ಮುನಿಸು ಹಗುರವಾಗಿದೆ
ಮೋಡ ಬಾನ ತೊರೆದಿಲ್ಲ.
ನಿನ್ನ ನೆನಪಲಿ ಕ್ಷಣ ಕ್ಷಣಕೂ
ಒಲವ ನದಿಗೆ ನೆರೆ ಬಂದಿದೆ.

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||

ಏನೇ ಬಂದರು ಬಿಟ್ಟಿರಲಾರೆ,
ಮುತ್ತನು ಕೊಡುತಲೇ ನಾ ಇರುವೆ.
ನಿಮ್ಮನು ಅಗಲಿ ಬಾಳೇ ಇಲ್ಲ
ನಿಂತೇ ಹೋಗಲಿ ನನ್ನುಸಿರೆಲ್ಲ.

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||

ವರವನ ಕೊಡೊ ದೇವರ ದೇವ
ನಿನ್ನನೇ ಸೇರುವೆ ಅದು ಸನ್ನಿಧಾನ
ಈ ಹಿಡಿತವದು ಹಿತವಾಗಿದೆ
ಹೊಸ ಜೀವಕೆ ನಾಂದಿಯಾಗಿದೆ

ಎದೆಯ ಮಿಡಿತದಲಿ ನೀನೆ ತಾನೆ,
ಉಸಿರಿನಾಳದಲೂ ನೀನೇ ತಾನೇ||