ವೀಳ್ಯದೆಲೆಯಲಿ ಅಡಿಕೆ ತಂದು ಕಟ್ಟೆಯ ಮೇಲಿಟ್ಟು, ಭಾವಿ ಪೂಜೆ ಮಾಡಿ ಬಿಂದಿಗೆಯಲ್ಲಿ ನೀರೆತ್ತಿ ಒಂದುಕೊಡ ತೆಂಗಿನ ಮರಕ್ಕೂ, ಇನ್ನೊಂದು ಕೊಡ ಹಂಡೆಗೂ ತುಂಬಿಸಿ, ಹಂಡೆಯನ್ನು ಪೂಜೆ ಮಾಡಿ ಮಾರನೆಯ ದಿನ ಅಭ್ಯಂಗ ಸ್ನಾನ ಮಾಡಲು ಸಿದ್ಧವಾಗಿಸಿಡುತ್ತಾರೆ.


ದೀಪಾವಳಿ ಹಬ್ಬವು ಆಚರಣೆಯ ಒಂದು ಪ್ರಧಾನ ಭಾಗವಾಗಿದೆ. 
 ಎರಡು ಕರಗಿಯಲ್ಲಿ ನೀರನ್ನ ತುಂಬಿಸಿ,  ಅದರ ಮೇಲೆ ಕಳಸವನಿಟ್ಟು ಒಂದರ ಮೇಲೆ ತೆಂಗಿನ ಕಾಯಿ, ಇನ್ನೊಂದರ ಮೇಲೆ ಮೊಗೆ ಕಾಯಿ ಇಟ್ಟು ಅಲಂಕರಿಸಿ ಪೂಜೆಯನ್ನು ಮಾಡಿ ಹೊಸ್ತಿಲಿನಿಂದ ಒಳಗೆ ಬರಮಾಡಿಕೊಂಡು ದೀಪವನ್ನು ಹಚ್ಚಿ ಎಣ್ಣೆ ತುಂಬಿರುವಂತೆ ನೋಡಿಕೊಂಡು ಹಬ್ಬ ಮುಗಿಯುವವರೆಗೂ ಕಾಪಾಡಿಕೊಂಡಿರುತ್ತಾರೆ.


ದೀಪಾವಳಿಯಂದು ಹಿಂಡಲಕಾಯಿ ಒಡೆಯುವ ಮೂಲಕ ನರಕಾಸುರ ಸಂಹಾರದ ಪ್ರಾತ್ಯಕ್ಷಿಕೆ.