ಬಂದು ಕಾಡತೊಡಗಿದೆ
ಬಂದು ಕಾಡತೊಡಗಿದೆ ಒಂದು
ಮೌನ ಛಾಯೆ!
ಸುತ್ತಲೂ ಶಾಂತ
ನಿಶ್ಯಬ್ದ ನೀರವ
ಯಾವ ಆಲಾಪವೂ
ಇಲ್ಲದ ಗಳಿಗೆ
ಮನದ ಪಿಸುಮಾತು
ಕೇಳದಾಗಿದೆ
ಎಂಥ ರವರವ
ರೌದ್ರ ಎನಿಸದೇ ಮನಕೆ!!
ನೀರವ ರೌದ್ರ!!!
ಮೌನ ಸಂಗ್ರಾಮ
ಎಲ್ಲಿಂದ ಬಂದರೋ ಯುದ್ದಕೆ
ಸೈನ್ಯವಿಲ್ಲದ ಹೋರಾಟ
ಯಾವ ಮಹಾಯುದ್ದಕೂ
ಇಲ್ಲದ ಮಹತ್ವ
ಗೆಲ್ಲಬೇಕೆಂಬ ಛಲ
ಸಾಗಿದೆ ಎದೆಯೊಳಗೆ ಮಿಂಚು
ಗೆಲ್ಲು ಮೌನವ
ಮಾತಾಡಿಸು
ಬಂದು ಕಾಡುವ ಮೌನವ
Naanu Prashanth Patgar

0 ಕಾಮೆಂಟ್‌ಗಳು
If you have any doubts pls comment