ದೇಶ ಗೀತೆ
ಮಾಡೋ… ಕೆಲಸವ ಮಾಡೋ
ಕೈ ಇಕ್ಕಿದ ಕಾರ್ಯವೋ;
ಕರ್ತವ್ಯದ
ಕರೆಯೋ; ದುಡಿಯೋ
ಅವಿರತ, ಪ್ರಾಣ
ಕೊಟ್ಟು ಪಡಿಯೋ,
ಆ ದೇವನೀವ ಫಲವೋ!
ಓ! ನನ್ನ ದೇಶಿಗನೇ,
ವ್ಯವಸ್ಠೆಗಿದೆ ಮತಿ
ಭ್ರಾಂತಿ,
ಹುತ್ತದಲ್ಲಿಟ್ಟೆಯಾ
ನಿನ ಛಾತಿ?
ನೀನಾಗಲಾರೆಯಾ ಕಾರ್ಯದಲೇ
ಖ್ಯಾತಿ
ಮಾಡೋ, ಕೆಲಸವ ಮಾಡೋ
ಬರೀ ಬಾಯಿ ಮಾತು!!!
ದುರ್ವಿಚಾರಗಳ
ಭ್ರಾಂತು
ಹೆಚ್ಚಿಸು
ನಿನ್ನಯ ಕೆಲಸವ
ತೊಡು ನೀ ನಿಜ ವೇಶವ
ಕಾಯೋ ಜೀವ; ನನ್ನ ದೇಶವ
ಜನಿಸಿದಿ
ನೀ ಪುಣ್ಯಭೂಮಿಯೊಳು
ಬರಿ ಹೊತ್ತು ಕಳೆದು ನೀ
ಸತ್ತುಹೋಗದಿರು
ಮಹಾ ಕಾರ್ಯದಲಿ ಸಿದ್ದಿಸುತಲಿರು
ಸೋತರು ಧೃತಿಗೆಡದಿರು
ಇಟ್ಟ ಕಾರ್ಯವ ಮಾಡೇ ನೀ
ತೀರು.
naanu Prashanth


0 ಕಾಮೆಂಟ್‌ಗಳು
If you have any doubts pls comment