ಮುಂದೊಂದು ದಿನ

ಅವನು ಏನು ಹೇಳಿದರು ಕೇಳಲಿಲ್ಲ
ಅವನು ಕಿವುಡನಲ್ಲ
ತಿಳಿಯದವನು ಅಲ್ಲ
ಏಕೆಂದರೆ ಅವನು ಮತಿಗೇಡಿ
ತಿಳಿಗೇಡಿ

ಬೇಕಿತ್ತಾ ಇದು ಎಂದು ಪರಿತಪಿಸಬಹುದು
ಮುಂದೊಂದು ದಿನ
ಹಣ್ಣಾದ ಗಡ್ಡವ ನೇವರಿಸುತ್ತಾ
ಮುಂದಿನ ಮನೆಯ ಮಾಡನ್ನು ನೋಡುತ್ತಾ
ಕೇಳದ ಮಾತನ್ನು ಆಗ ನೆನೆಯುತ್ತಾ

ನೀಲ ಗಗನದಲಿ ನೂರೆಂಟು ನಕ್ಷತ್ರ
ನನಗೂ ಸಿಗಬಹುದೇ ಅಲ್ಲಿ ಸ್ಥಾನ
ವಿಚಾರಿಸದೇ ಇದ್ದರೆ
ಆಗುವ ನಷ್ಟ ನನಗೇ ಅಲ್ಲವೇ???

- ನಾನು  ಪ್ರಶಾಂತ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು