ತಿಂಗಳ ರಾತ್ರಿಲಿ
ಮೇಲೆ ನೋಡಲು
ಕಂಡದ್ದೇನು ಹೇಳು ಮರಿ

ಮಿಣಿ ಮಿಣಿ ತಾರೆ
ಜಗ ಮಗ ಚಂದ್ರ
ಹೇಳಿದವೇನು ಮೇಲೇರಿ

ಏನೂ ತೋಚದು
ನಿನ್ನಯ ಮಾತಲಿ
ತೋರಿದಂತೆ ಪ್ರಶ್ನೆಗರಿ

ಜ್ಞಾನದ ಪಸರು
ಅವುಗಳ ಹೆಸರು
ಉತ್ತರ ಹೇಳಲು ನೀನೆ ಸರಿ.