ಪ್ರೀತಿ ಇದ್ದಡೆ...
ಕ್ಷಣ ಕ್ಷಣವೂ ನಗದಿರೆವು,
ಜೊತೆಗೇ ಇರಲು ಒದ್ದಾಡೆವು,
ಸನಿಹವಿಲ್ಲದಿರೆ ಕೋಪಿಸೆವು.
ಪ್ರೀತಿ ಇಲ್ಲದೆಡೆ???

ಪ್ರೀತಿ ಇದ್ದಡೆ...
ಕ್ಷಣ ಕ್ಷಣವೂ ಸನಿಹ ಬಿಡೆವು,
ಕೆಲಸದಲೇ ಹಿತ ಕಂಡೆವು,
ಮುಗಿಯದಿರೆ ಒದ್ದಾಡೆವು.
ಪ್ರೀತಿ ಇಲ್ಲದೆಡೆ!!!

ಪ್ರೀತಿ ಇದ್ದಡೆ...
ಕ್ಷಣ ಕ್ಷಣವೂ ಹಠ ಹೂಡೆವು,
ಪಟ್ಟು ಬಿಡದಲೆ ಹೋರಾಡೆವು,
ಪಡೆದೆ ಪಡೆವ ಛಲದ ಬೀಜ ಬಿತ್ತೆವು.
ಪ್ರೀತಿ ಇಲ್ಲದೆಡೆ!!!

ಪ್ರೀತಿ ಇದ್ದಡೆ...
ಮರುಭೂಮಿಯಲೂ ಹಸಿರುಕ್ಕಿಸೆವು
ಕಿತ್ತು ನೆಟ್ಟರೂ ಮತ್ತೆ ಜೀವ ಇಟ್ಟೆವು,
ಕರ್ತವ್ಯದ ಕರೆಗೆ ಓಗೊಡುತ್ತಲೇ ಜೀವ ತೊರೆದೆವು
ಪ್ರೀತಿ ಇಲ್ಲದೆಡೆ!!!

ಪ್ರೀತಿ ಇದ್ದೆಡೆ
ನಾ ಪ್ರಶಾಂತನಾಗದೆ ಇರೆನು
ಪ್ರೀತಿ ಇಲ್ಲದೆಡೆ???