ಮನದ ಮೌನವು ಮಾತನಾಡಿತು
ನೀ ಮಾತನಾಡದಾ ಗಳಿಗೆಯಲಿ
ಮುಂಬೆಳಗಿನ ಸವಿಯೊಂದಿಗೆ
ನಿನ್ನ ಕುಹು ಕುಹು ದನಿಯೊಂದಿಗೆ
ಶುರುವಾಯಿತು ನನ್ನ ಬಾಳು ಇದರೊಂದಿಗೆ
ಸಂಜೆಯಾದೊಡೆ ಎಲ್ಲಿ ಮರೆಯಾದೆ ನಿನ್ನ ಹುಡುಕಿ ಸಿಗದಾಗ......
ಮನದ ಮೌನವು ಮಾತಾಡಿತು
ನೀ ಮಾತಾಡದಾ ಗಳಿಗೆಯಲಿ
ಬಂದೆ ಚೆಲುವಿಕೆಯ ಸಾಕ್ಷಿಯೊಂದಿಗೆ
ನಿನ್ನ ಕೆದಗೆಯ ಹರಿತ ನೋಟದೊಂದಿಗೆ
ಸೋಲಾಯಿತು ನನ್ನ ದೃತಿಗೆ ಇದರೊಂದಿಗೆ
ಸಂಜೆಯಾದೊಡೆ ಎಲ್ಲಿ ದೂರವಾದೆ
ನಿನ್ನ ಹುಡುಕಿ ಸಿಗದಾಗ.....
ಮನದ ಮೌನವು ಮಾತಾಡಿತು
ನೀ ಮಾತಾಡದಾ ಗಳಿಗೆಯಲಿ
ಇಳಿದೆ ಒಳಗೆ ಒಲವಿನೊಂದಿಗೆ
ನಿನ್ನ ಒಲುಮೆಯ ಎದೆಯೊಂದಿಗೆ
ನೆಲೆಯಾದೆ ನನ್ನ ದೀರ್ಘ ತಪದೊಂದಿಗೆ
ತುಟಿಯಂಚ ತೋರಿಸಿ ಎಲ್ಲಿ ಮರೆಯಾದೆ
ನಿನ್ನ ಸನಿಹ ಸಿಗದಾಗ...
ಮನದ ಮೌನವು ಮಾತಾಡಿತು
ನೀ ಮಾತಾಡದಾ ಗಳಿಗೆಯಲಿ.
ನಾನು ಪ್ರಶಾಂತ


0 ಕಾಮೆಂಟ್‌ಗಳು
If you have any doubts pls comment