ವಿನಂತಿ

ವಿನಂತಿಯ ಕೋರಿಕೆ


ಅಳಿಸಿ ಹಾಕು ನನ್ನ ಹೆಸರು
ಮುಗಿಸು ಎಂದು ನನ್ನ ಉಸಿರು
ಬೇಡುವೆನು ಭಗವಂತನೆ

ಹಸಿರು ಭೂಮಿ ಬರಡು ಕೊರಡು
ನೀರೆ ಇರದೆ ಒಣಗಿ ಕೊನೆಗೆ
ಕಣ್ಣ ಗುಡ್ಡೆ ಚಾಚಿ ಬಂತು
ಇನಿಯೇ ನಿನ್ನ ಕಾಣದೆ

ತೊರೆದು ಕೂಗಿ ತೆರೆದು ಕರೆದು
ಬರದ ಛಾಯೆ ಭೂಮಿಗೆರೆದು
ನೀನು ನಿಂತೆ ಹೊರಟು ಬಿಡಲು
ನಾನು ಏನ ಮಾಡಲಿ?

ನಿನ್ನ ನಾಮ ಸ್ಮರಣೆಯು
ಹೃದಯ ತುಂಬಿ ದ್ವನಿಸಲು
ಗುಡಿಯ ತುಂಬಾ ಗಂಟೆನಾದ
ಹೊಮ್ಮಿ ಕೇಳಿ ಬರುತಿದೆ.

ಹೀಗೆ ಇದ್ದರಿಲ್ಲಿಯೆ
ಗಳಿಗೆ ಒಂದು ನಿಲ್ಲದು
ಏನೆ ಮಾಡು ಸಾವ ಮೊದಲು
ಕಳೆದು ಕೂಡಿ ಬದುಕುವಾ.

-- ಪ್ರಶಾಂತ ಪಟಗಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು