ಮರಳಿ ಸಿಕ್ಕಿದೆ ಭಾವ

ಕತ್ತಲಕೂಪದಲಿ ಮಿಂದಿದ್ದ ಸೂರ್ಯ.
ಬೆಳಕರಿವ ಮೊದಲು ಚಡಪಡಿಕೆಯಲಿದ್ದ.
ಬರಲೋ ಎಂದೆಣಿಸಿ ಆಯ ಹಾಕುತಲಿದ್ದ.
ಯೋಚನೆಯ ಕೂಪದಲಿ ಬಿದ್ದವಗೆ,
ಚಿತೆಯ ಸಾಮಿಪ್ಯ ಹಿತವೆನಿಸಲು
ಪಾತಾಳದ ಮರೆಗೋಡುತಲಿದ್ದ.
ಬೆಳಕೆಂದರೆ ಅಲವರಿಸಿಕೊಂಡಿದ್ದ.
ತನ್ನದೆನ್ನುವುದನ್ನ ಬಿಟ್ಟು ಲುಪ್ತನಾಗಿದ್ದ.
ಶಿವಸೃಷ್ಟಿ ಕಪ್ಪು ಪರದೆ ಸರಿಸಿ.
ಮೋಡದೆಲೆಗಳ ಗುಡಿಸಿ ಹಸನುಮಾಡಿ
ಕೇಸರಿಯ ಬಾನುವಿಗೆ ಬಾನಲ್ಲಿ ಅನುವುಮಾಡಿದ.