ಚಡ-ಪಡಿಕೆ

ಈ ಸಂಜೆಗಳು ಉರುಳಿ ಹೀಗೆ ಹೋಗುತ್ತಿವೆ..
ಮುಂಜಾನೆಗಳು
ಗೊತ್ತೇ ಆಗದೆ
ಸಂಜಾನೆಗಳಾಗುತಿವೆ.
ಕಾರ್ಯ ಮುಗಿಯದೇನೋ
ಚಡ-ಪಡಿಕೆ ಶುರುವಾಗಿದೆ
ಯಾವುದೂ ಇಲ್ಲದೇ ಇಲ್ಲೇ ಕುಳಿತು ಮಾಡಲೇನು?
ಹೊರಗೆ ಬಂದು ಬಿಡಲೆ?
ಬಂದರೆ ದಾರಿ ಸರಿ ಗೋಚರಿಸುವುದು ದುಸ್ಸಾಹಸ?
ದುರ್ಯೋಧನನಾಗಲೋ... ರಾಮನಾಗಲೋ...
ಸೀತೆಯ ಅಪಹರಿಸಿ ಮುಕ್ತಿ ಹೊಂದಲೆ
ಸೀತೆಯ ಭಯ ಬಿಡಿಸಿ ಧೀರನಾಗಲೆ
ಏನಾಗಲೋ?