ರಾತ್ರಿ ಹುಟ್ಟಿದ ಕವನ

ಓ ನನ್ನ ಜೀವ
ಜನುಮ ಜನುಮದ ರಸಗ್ರಾಹಿ
ಬಾ ಬಂದೆನ್ನ ತಬ್ಬಿಕೊ
ಕೈ ಸಡಿಲವಾಗದಂತೆ
ಮತ್ತೆ ಮತ್ತೆ ತಬ್ಬಿಕೋ
ಅಲೆಗಳಂದದಿ, ಮತ್ತೆ ಮತ್ತೆ ಮುತ್ತಿಟ್ಟಿಕೋ.

ಏನಿದೇನಿದು ವ್ಯರ್ಥ ಪ್ರಲಾಪನೆ.
ನೀನೇ ನೀನೆಂದಮೇಲೆ ನನ್ನದೇನಿದೆ?
ಕೂಡಿಸುವಿಕೆಯ ಕಥೆ ಸಾಗಿದೆ,
ಕಳೆಯುವ ಸಾಹಿತ್ಯ ಬಾಗಿಲಾಚೆಗಿದೆ

ಬಂದು ಬಂದು ಬಿಡದೆ,
ಕಚ್ಚುವ ಸೊಳ್ಳೆಗಳೆಷ್ಟು?
ಚುಚ್ಚಿ ಚುಚ್ಚಿ ಕಾಡುವ ನೋವುಗಳೆಷ್ಟು?
ಹೊಡೆತಕ್ಕೆ ತಪ್ಪಿದವುಗಳಷ್ಟೋ?
ಮತ್ತೆ ಬರದಂತೆ ಸತ್ತವುಗಳೆಷ್ಟೋ,
ಉಳಿದ ಕೆಲವಷ್ಟನು ಹುಡುಕಿ,
ಮುಗಿಸುವರೆಗೆ ನೆಮ್ಮದಿ ಕಾಣುತಿದೆ ಕೊರತೆ.

ಮಧ್ಯದಲೇ ಎದ್ದು ಕೆರೆದುಕೊಳುವಷ್ಟು ನೋವು,
ಸವಿ ಜೀವನ ಉಣ್ಣುವುದೆಂದು?
ಇದುವೆ ಆಚರಣೆ ತಿಳಿಯದಾಗ.
ಎಲ್ಲವೂ ತನ್ನದೆ ಧ್ಯಾನದಲಿ ಮುಳುಗಿ
ತನ್ಮಯತೆಯಲಿ ಆಚರಣೆಗೊಳುತಿರುವುದು.

😀ಪ್ರಶಾಂತನ ಕೊರೆತ, ಅಲ್ಲ ಅಲ್ಲ ಮೊರೆತ😂