ಮಾವಿನ ಹಣ್ಣು

ಮನೆಗೆ ಹೋಗುವಾಗ
ಮಾವು ನಕ್ಕಿತು,
ಹಳದಿ ಕೆಂಪು ದೊಡ್ಡ ಹಣ್ನು
ಕಣ್ಣು ಕುಕ್ಕಿತು.

ಮುಂದೆ ಇರುವ ಎರಡು ಹಣ್ಣು
ನನ್ನ ಸೆಳೆಯಿತು,
ಬಾಯಿಯಿಂದ ಧಾರಾಕಾರ
ಜೊಲ್ಲು ಸುರಿಯಿತು,

ತಿನ್ನಬೇಕು ಹಣ್ಣು ಎರಡು
ಮನವು ಬಯಸಿತು
ಗಾಳಿ ಬೀಸಿ ಜೋರು ಬರಲು
ಹಣ್ಣು ಬಿದ್ದಿತು

ಕೆಳಗೆ ಬಿದ್ದ ಹಣ್ಣು ನಾಲ್ಕು
ಬೇಗ ಕೈ ಸೇರಿತು
ಹಸನುಗೊಂಡ ಸ್ವಚ್ಚ ಹಣ್ಣು
ಕಂಡು ಹೊಟ್ಟೆ ನಕ್ಕಿತು.